Wednesday, 14 March 2012

ಲಕ್ಕಿ ರಾಧಿಕಾ


ರಾಧಿಕಾ  "ನಿನಗಾಗಿ" ಕನ್ನಡ ಚಿತ್ರದಿಂದ ಕನ್ನಡಿಗರಿಗೆ ಪರಿಚಿತರಾದವರು.
ನಾಲ್ಕೈದು ಚಿತ್ರಗಳು, ನಂತರ ತಂಗಿಯ ಪಾತ್ರಗಳಲ್ಲಿ ನಟನೆ.
ಇದಾದ ಕೆಲವು ದಿನಗಳಲ್ಲಿ ಅದೆಂಥಾ ಮಾರ್ಪಾಡು ಆಕೆಯ ಜೀವನದಲ್ಲಿ!

ಏಕಾಏಕಿ ಮುಖ್ಯಮಂತ್ರಿಯಾದವರ ಜೊತೆ ಮಾತುಗಳು ಕೇಳಿಬಂದವು. ಗಾಸಿಪ್ ಗಳೆಂದರು
ವಾಣಿಜ್ಯ ತೆರಿಗೆಯಿಂದ ರೈಡ್ ಆದಾಗ ಮುಖ್ಯಮಂತ್ರಿಗಳೇ ಆಕೆಯ ಮನೆಯಲ್ಲಿ ಕಾಣಿಸಿಕೊಂಡ ಸುದ್ಧಿ ಹರಿದಾಡಿದವು. ಹಾಯ್ ಬೆಂಗಳೂರ್ ನಂತಹ ಪತ್ರಿಕೆ "ರಾಧಿಕೆಯ ಬಗ್ಗೆ ಬರೆಯಿತು" 

ಅದೇ ಹುಮ್ಮಸ್ಸಿನಲ್ಲಿ ಪ್ರಖ್ಯಾತರಾದ "ರವಿ ಬೆಳಗೆರೆ " ಯವರು
"ಮುಖ್ಯಮಂತ್ರಿ ಐ ಲವ್ ಯೂ..... ರಾಧಿಕೆ ಸರಸವಿದೇಕೇ................ "ಎಂಬ ಶೀರ್ಷಿಕೆಯೊಂದಿಗೆ ದುನಿಯಾ ವಿಜಿ, ಹರಿಪ್ರಿಯ, ಅಂಕಲ್ ಲೋಕನಾಥ್ ರೊಡನೆ ಸಾಕ್ಷಿ ಬೆಳೆಗೆರೆಯಾಗಿ ನಟನೆಯ ಜೊತೆಗೆ ರವಿಬೆಳಗೆರೆಯವರೇ ನಿರ್ದೇಶಿಸಲು ಹೊರಟರು. ಸುದ್ದಿ ಮಾಡಿಕೊಂಡರು. ಚಿತ್ರೀಕರಣವೂ ಸಾಗಿತ್ತು. ನ್ಯಾಯಾಲಯದ ಮೆಟ್ಟಿಲೂ ಏರಿತು. ಬರ್ತಾ ಬರ್ತಾ ರವಿಬೆಳೆಗೆರೆಯವರಿಗೆ ಚಿತ್ರದ ಮೇಲಿನ ಆಸಕ್ತಿಯೂ ಹೋಗಿ ತಣ್ಣಗಾಯಿತು.

ರಾಧಿಕೆ  ಮತ್ತು ಮಾಜಿ ಮುಖ್ಯ ಮಂತ್ರಿಗಳ ಜೊತೆಗಿನ ನಾಗಮಂಡೋತ್ಸವದ   ಬಗ್ಗೆ ಒಂದೆರೆಡು ಫೋಟೋಗಳು,
ಹರಿದಾಡಿದವು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ


ಈ ಭಾವಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದುವು, ಇಂಟರ್ ನೆಟ್ ನಲ್ಲಿ ಹರಿದಾಡಿದವು.
ರಾಧಿಕಾ  " ಮಾಧ್ಯಮಗಳ ಮುಂದೆ ಬಂದು ಈ ಮಗುವಿನ ಹೆಸರು "ಶಮಿಕಾ ಕೆ. ಸ್ವಾಮಿ" ಎಂದು ಹೇಳಿ ಹೋದರು.
ಹಾಗೆ ಬರ್ತಾ ಬರ್ತಾ "ರಾಧಿಕಾವಾಗಿದ್ದವಳು *ಶ್ರೀಮತಿ ರಾಧಿಕಾ ಕುಮಾರಸ್ವಾಮಿ* ಯಾಗಿ ಕಾಣಿಸಿಕೊಂಡರು.
"ಅನಾಥರು" ಎಂಬ ಸೋಲುವ ಚಿತ್ರವನ್ನು ಪಡೆದುಕೊಂಡು ಬಿಡುಗಡೆ ಮಾಡಿ ಹಣ ಕಳೆದುಕೊಂಡು ಹೆಸರು ಮಾಡಿದರು.

ಇನ್ನು ಒಂದು ಹೆಜ್ಜೆ ಮುಂದೆ ಬಂದು ಕನ್ನಡ ನಾಡಿನ ಜನಕ್ಕೆ "ಲಕ್ಕಿ" ಎಂಬ ಚಲನ ಚಿತ್ರವನ್ನು
ಶ್ರೀ ಹೆಚ್. ಡಿ. ಕುಮಾರಸ್ವಾಮಿಯವರು ಅರ್ಪಿಸಿಕೊಂಡು,  ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ನಿರ್ಮಿಸಿ

ಮಾಧ್ಯಮಗಳ ಮುಂದೆ ನೇರವಾಗಿ ನಾನು "ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ಪತ್ನಿ" ಎಂಬ ವಿಚಾರವನ್ನು ಹೇಳಿಕೊಂಡು ಸಂದರ್ಶನಗಳನ್ನು ಕೊಟ್ಟು, ತನ್ನ ಯಜಮಾನರನ್ನು ಯಾವ ರೀತಿ ಪ್ರೀತಿ ಮಾಡಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹಿಳೆಯಾಗಿ ಹೇಳಿಕೆಗಳನ್ನು ಕೊಟ್ಟರು.

ನಮ್ಮ ,ಮಹಾನ್ ಮಾಧ್ಯಮಗಳು "ಇವುಗಳನ್ನೇ ಮಹಾಪ್ರಸಾದ  ಎಂಬಂತೆ ಸ್ವೀಕರಿಸಿ, ತೋರಿಸಿದ್ದೇ ತೋರಿಸಿದ್ದು" ಇದರ ಬಗ್ಗೆ  ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದಾರೆ.

ಇದ್ಯಾವುದನ್ನು ತಲೆಕೆಡಿಸಿಕೊಳ್ಳದ  ಈ ಜೋಡಿ ತಮ್ಮ ಪ್ರೇಮ, ಸಂಬಂಧವನ್ನು ಚಾಕಚಕ್ಯತೆಯಿಂದ ಹಂತ ಹಂತವಾಗಿಜನರ ಮುಂದೆ ತೆರೆದಿಡುತ್ತಾ ಬಂದು. ಯಶಸ್ವಿಯೂ ಆಯಿತು.
* ಮೊದ ಮೊದಲು ಇದೆಲ್ಲಾ ಗಾಸಿಪ್ ಗಳೆಂಬಂತೆ ಬಿಂಬಿತವಾದುವು
* ನಿಧಾನವಾಗಿ ಪತ್ರಿಕೆಗಳಲ್ಲಿ ಬರುವಂತೆಯೂ ಮಾಡಲಾಯಿತು.
* ಪೂಜೆಯಲ್ಲಿ ಕಾಣಿಸಿಕೊಳ್ಳುವ ಸಂದರ್ಭವನ್ನೂ ಸಹ ಬಹಿರೆಂಗಗೊಳಿಸಲಾಯಿತು
* ಮಗುವಿನ ಜೊತೆ, ಹುಟ್ಟುಹಬ್ಬದ ಫೋಟೋಗಳ ಅನಾವರಣ
* ಲಕ್ಕಿ ಚಿತ್ರದ ಮೂಲಕ ಬಹಿರಂಗ ವಾಗಿ ತೆರೆಮರೆಯಲ್ಲಿದ್ದ ವಿಷಯ ಕನ್ನಡ ನಾಡಿನ ಜನರ ಮುಂದೆಬಿಚ್ಚಿಡಲಾಯಿತು.
ಎಷ್ಟು ನಾಜೂಕಾಗಿ ರಾಧಿಕೆ ಈ ಸಂಬಂಧವನ್ನು ಸಕ್ರಮಗೊಳಿಸಿಕೊಂಡರು ಅಲ್ಲವೇ?
* ಎರಡು ಮೂರು ದಿನಗಳ ಹಿಂದೆ ಮತ್ತೆ "ನಾಗಮಂಡಲ ಪೂಜೆಯಲ್ಲಿ" ಕಾಣಿಸಿಕೊಳ್ಳುವ ಮೂಲಕ ತಾವೇನೆಂದು ತೋರಿಸಿಕೊಟ್ಟಿದ್ದಾರೆ.

ಅಬ್ಬಾ ನೆನಸಿಕೊಂಡರೆ ನಿಜಕ್ಕೂ ಶ್ರೀಮತಿ ರಾಧಿಕಾ ಕುಮಾರಸ್ವಾಮಿಯವರ ಧೈರ್ಯಕ್ಕೆ ಮೆಚ್ಚಲೇ ಬೇಕು.
ಮಾಜಿ ಪ್ರಧಾನಿಯ ಸೊಸೆಯಾಗಿ, ಮಾಜಿ ಮುಖ್ಯಮಂತ್ರಿಯ ಮಡದಿಯಾಗಿ ತನ್ನ ಜೀವನದ ನಟನೆಯನ್ನು ಮುಗಿಸಿಕೊಂಡಿದ್ದಾರೆ.
ಮುಂದೆ  ಯಾವುದಾದರೂ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕರಾಗಿ, ಮಂತ್ರಿಯಾಗಲೂ ಬಹುದು. ಆಶ್ಚರ್ಯಪಡಬೇಕಿಲ್ಲ. ಇದು ಸಾಧ್ಯ!  ನಮ್ಮಂತಹ ಪ್ರಜ್ಞಾವಂತ ಮತದಾರರು ಇರುವವರೆಗೂ ಸಾಧ್ಯ!
ಇವರೆಲ್ಲಾ ನೈತಿಕತೆಯ ಬಗ್ಗೆ ಮಾತಾನಾಡುತ್ತಾರೆ. 
ಇಷ್ಟೆಲ್ಲಾ ನೇರ ದಾಖಲೆಗಳು ನೇರ ಹೇಳಿಕೆಗಳು ಕೊಟ್ಟಿದ್ದರೂ ಸಹ 
ಅಹಾ! ನಮ್ಮ ಬೃಹತ್ ಮಾಧ್ಯಮಗಳು : ಅವರ ಸಂದರ್ಶಗಳನ್ನು ಮಾಡಿ,  ಅನ್ಯಾಯಕ್ಕೆ ರತ್ನಕಂಬಳಿ ಹಾಸಿ ಖುಷಿ ಪಡುತ್ತಿವೆ. 
ಯಾಕೆ ಈ ವಿಷಯದ ಬಗ್ಗೆ ನೇರವಾಗಿ ಕುಮಾರಸ್ವಾಮಿಯವರ ಬಳಿ ಕೇಳುವುದಿಲ್ಲ.
ದೇವೇಗೌಡರನ್ನು ಕೇಳುವುದಿಲ್ಲ. 
ಶ್ರೀಮತಿ ಅನಿತಾ ಕುಮಾರಸ್ವಾಮಿಯವರನ್ನು ಕೇಳುವುದಿಲ್ಲ. 
ಮೇಲೆ ಹೇಳಿರುವ ಅಷ್ಟೂ ಜನರೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವವರು, ಅವರಿಗೆ ರಾಜ್ಯವಾಳಲು, ದೇಶವಾಳಲು ನಾವುಗಳೇ ಮತ ನೀಡಿ ಅವಕಾಶ ಕೊಟ್ಟಿದ್ದೇವೆ. 
ಅವರುಗಳು ನಮ್ಮ ರಾಜ್ಯವನ್ನು ದೇಶವನ್ನು ಆಳಿದ, ಆಳುವ ನಾಯಕರುಗಳ ತಪ್ಪು ಹಾದಿಯನ್ನು
ಪ್ರಶ್ನಿಸಲು ನಮ್ಮ ಮಾಧ್ಯಮಗಳಿಗೆ ಮುಜುಗರವೇ?